News Cafe | ಆಸ್ತಿ ರಕ್ಷಣೆಗೆ ಬಿಬಿಎಂಪಿ ನಯಾ ಪ್ಲಾನ್..! | June 12, 2022

2022-06-12 2

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ವಿವಾದ ಬಿಬಿಎಂಪಿಗೆ ದೊಡ್ಡ ತಲೆನೋವಾಗಿದೆ. ಒಂದ್ಕಡೆ ಈದ್ಗಾ ಮೈದಾನ ನಮ್ದು ಅಂತಾ ಬಿಬಿಎಂಪಿ ಅಂದರೆ.. ಮತ್ತೊಂದ್ಕಡೆ ವಕ್ಫ್ ಬೋರ್ಡ್ ನಮ್ಮ ಬಳಿನು ದಾಖಲಾತಿ ಇದೆ ಅಂತಿದೆ. ಹೀಗಾಗಿ ಬಿಬಿಎಂಪಿ ತನ್ನ ಆಸ್ತಿಗಳನ್ನ ರಕ್ಷಣೆ ಮಾಡಿಕೊಳ್ಳಲು ನಯಾ ಪ್ಲ್ಯಾನ್ ಮಾಡಿದೆ. ಅದೇ ನಿವೃತ್ತ ಕಂದಾಯ ಅಧಿಕಾರಿಗಳ ಸಮಿತಿ ರಚನೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡಿದ ನಿವೃತ್ತ ಕಂದಾಯ ಅಧಿಕಾರಿಗಳ ಟೀಂ ರಚಿಸಿ, ಇವರ ಮುಖಾಂತರ ಎಷ್ಟೆಷ್ಟು ಆಸ್ತಿ ಇದೆ. ಎಷ್ಟು ಲೀಸ್ ನೀಡಲಾಗಿದೆ ಮತ್ತು ಅದನ್ನ ಪಡೆಯುವುದು ಹೇಗೆ ಅಂತಾ ಈ ನಿವೃತ್ತ ಕಂದಾಯ ಅಧಿಕಾರ ಮೂಲಕ ಸಲಹೆ ಪಡೆದು ಆಸ್ತಿ ವಾಪಾಸ್ ಪಡೆಯಲು ಪ್ಲ್ಯಾನ್ ಮಾಡಿದೆ. ಬಿಬಿಎಂಪಿ ಬಳಿ ಒಟ್ಟು 6,125 ಆಸ್ತಿ ಇದ್ದು, ಅದ್ರಲ್ಲಿ 324 ಆಸ್ತಿಗಳನ್ನ ಲೀಸ್ ನೀಡಲಾಗಿದೆ. ಈ ಪೈಕಿ 164 ಆಸ್ತಿಯ ಲೀಸ್ ಅವಧಿ ಮುಕ್ತಾಯ ಆಗಿದೆ. ಹೀಗಾಗಿ ಈ ನಿಟ್ಟಿನಲ್ಲಿ ಆಸ್ತಿ ಸೇಫ್ ಮಾಡಿಕೊಳ್ಳುವ ಯೋಚನೆ ಪಾಲಿಕೆ ಇದೆ. ಇನ್ನೂ ಬಿಬಿಎಂಪಿ ಆಸ್ತಿಯನ್ನು ಜಿಪಿಎಸ್ ಮಾಡಿ ಸರ್ವೆ ಮಾಡಿಸಲು 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗಬಹುದು. ಒಂದು ತಿಂಗಳ ಒಳಗಡೆ ಪ್ರಸ್ತಾವನೆ ಮಾಡಿ. 6 ತಿಂಗಳ ಒಳಗೆ ಕೆಲಸ ಮುಗಿಸುವ ಪ್ಲ್ಯಾನ್ ಇದೆ. ಆದರೆ ಈದ್ಗಾ ಮೈದಾನವನ್ನು ಯಾವುದೇ ಕಾರಣಕ್ಕೂ ಬಿಬಿಎಂಪಿಗೆ ನೀಡದಿರಲು ಮುಸ್ಲಿಂ ಮುಖಂಡರು ನಿರ್ಧರಿಸಿದ್ದಾರೆ. ಕಾನೂನು ಮೂಲಕ ಹೋರಾಟ ನಡೆಸಲು ಪ್ಲಾನ್ ಮಾಡಿದ್ದಾರೆ. ಈದ್ಗಾವನ್ನು ಶತಾಯಗತಾಯ ಉಳಿಸಿಕೊಳ್ಳಲು ಪ್ಲ್ಯಾನ್ ಎ.. ಪ್ಲ್ಯಾನ್ ಬಿ ಬ್ಲ್ಯೂಪ್ರಿಂಟ್ ರೆಡಿ ಮಾಡಿಕೊಂಡಿದ್ದಾರೆ. ಅಲ್ಲದೇ ಈದ್ಗಾ ಸಂಬಂಧ ಎಲ್ಲ ದಾಖಲೆಗಳನ್ನು ಕ್ರೋಢೀಕರಿಸಿ ಸಿಎಂ ಭೇಟಿಯಾಗಿ ದಾಖಲೆ ತೋರಿಸಲು ಸಹ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

#publictv #newscafe #idgahmaidan